ಕ್ರೈಸಮೀನ್, ಜಿ
	ಆಜೊವರ್ಣ ದ್ರವ್ಯ (ಡೈ); ಹಳದಿಮಿಶ್ರಿತ ಕಂದು ಬಣ್ಣದ ಪುಡಿ. ನೀರಿನಲ್ಲಿ ತೀರ ಮಿತವಾಗಿ ವಿಲೀನವಾಗುತ್ತದೆ. ಬೆಂಜಿóಡೀನಿನಿಂದ ತಯಾರಿಸಬಹುದಾದ ಅನೇಕ ವರ್ಣದ್ರವ್ಯಗಳಲ್ಲಿ ಇದೂ ಒಂದು. ಬೆಂಜಿóಡೀನನ್ನು ಟೆಟ್ರಜೊóಟೈಸ್ó ಮಾಡಿ ಸ್ಯಾಲಿಸಿಲಿಕ್ ಆಮ್ಲದೊಡನೆ ಸಂಲಗ್ನಗೊಳಿಸಿ (ಕಪಲ್) ಕ್ರೈಸಮೀನ್, ಜಿ. ಯನ್ನು ತಯಾರಿಸುತ್ತಾರೆ. ಇದನ್ನು ಹತ್ತಿಗೆ ನೇರ ಹಳದಿ ವರ್ಣದ್ರವ್ಯವಾಗಿ ಉಪಯೋಗಿಸಲಾಗುವುದು.							(ಎಲ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ